ನೆಮ್ಮದಿ
ಎಲ್ಲರೂ ಹಗಲಿರುಳು
ದುಡಿಯುತ್ತಿರುವರು ಆದರೇ
ಯಾರಿಗೂ ಇಲ್ಲ ಈ
ನೆಮ್ಮದಿ ಎಂಬ ಮಾಯೆ
ನೆಮ್ಮದಿಯನ್ನು ಹುಡುಕಿಕೊಂಡು
ಹೊದವರಿಗೆಲ್ಲ ಹಸಿವಿನ ಬೀತಿ
ಹಸಿವು ನೀಗಿದರೂ ಆದರೂ ಸಿಗಲಿಲ್ಲ
ನೆಮ್ಮದಿ ಎಂಬ ಮಾಯೆ
ಕೆಲವರಿಗೆ ಬಹಳ ಧನವಿದೆ
ಆದರೂ ಅವರಿಗು ಇನ್ನೂ ಬಿಟ್ಟಿಲ್ಲ
ಅದರ ವ್ಯಾಮೋಹ. ಆದರೆ ಅವರಿಗೂ
ಸಿಗಲಿಲ್ಲ ನೆಮ್ಮದಿ ಎಂಬ ಮಾಯೆ
ಹಲವರಿಗೆ ಇದೆ ಎಲ್ಲಾ ಸೌಕರ್ಯಗಳು
ಆದರೆ ಅವರಿಗೂ ಇಲ್ಲ ನೆಮ್ಮದಿ
ಕೆಲವರಿಗೆ ಮಾತ್ರ ಅವರ ಪಾಡಿನ ನೆಮ್ಮದಿ ಜೀವನ
ಅವರಿಗೆ ಹೇಗೆ ಸಿಕ್ಕಿತು ಈ ನೆಮ್ಮದಿ ಎಂಬ ಮಾಯೆ
No comments:
Post a Comment