Sunday 1 March 2015

                                 ಹರಿದ  ಅಂಗಿ ಒಂದು ನೆನಪು

ಮತ್ತದೇ ಹಳೆಯ ನೆನಪು
ಹರಿದ ಅಂಗಿಯೋಳಗಿನ ನಾನು
ಇಲ್ಲ, ನಾನು ಹಾಕಿಕೊಂಡ ಹರಿದ ಅಂಗಿಯ ನೆನಪು

ಆಗ ಹರಿದ ಅಂಗಿ ಹಾಕಿದ್ದರೂ 
ನನಗೆ ಯಾವುದೇ ಅವಮಾನ ಅನುಸುತ್ತಿರಲಿಲ್ಲ
ಇಂದು ಯಾಕೋ ಎಲ್ಲವೂ ಹೊಸತು
ಆದರೇ ಮನಸ್ಸು ಮಾತ್ರ ಹರಿದ 
ಅಂಗಿಯಂತಾಗಿದೆ, ಯಾಕೋ ತಿಳಿಯದಾಗಿದೆ.
ಮನಸ್ಸಿನಲ್ಲಿ ತುಂಬಿರುವ ತಳಮಳಗಳನ್ನು
ಹೇಗೆ ಸರಿದೂಗಿಸುವುದು ತಿಳಿಯದಾಗಿದೆ
ಇಂದು ಜೀವನವೇ ಒಂದು ನರಕಯಾತನೆ ಎಂದೆನಿಸುತ್ತಿದೆ
70 ಕ್ಕೆ ಬರುವ ಒಂಟಿತನ
25 ಕ್ಕೆ ಬಂದಿತ್ತಲ್ಲ ಎಂಬ ತಳಮಳ

ಇಂದು ನನ್ನ ಮನಸ್ಸು ಮಾತ್ರ ಹರಿದ 
ಅಂಗಿಯಂತಾಗಿದೆ, ಇಲ್ಲವೇ ಎಲ್ಲರ ಮನಸ್ಸು
ಅದೇ ರೀತಿಯಲ್ಲಿದೆಯೇ ತಿಳಿಯದಾಗಿದೆ
ಹರಿದು ಹಂಚಿರುವ ಮನಸ್ಸನ್ನು ಸರಿದಾರಿಗೆ 
ತರಲು ಸಾದ್ಯವಿಲ್ಲವೇ ತಿಳಿಯದಾಗಿದೆ

ಹರಿದ ಅಂಗಿಯನ್ನು ಹೇಗೆ ಮೋದಲನೇ
ಸ್ಥಿತಿಗೆ ತರಲು ಸಾದ್ಯವಿಲ್ಲದಾಗ
ಮತ್ತೆ ಹೊಸ ಅಂಗಿಯನ್ನು ತಂದು ತೋಡಬಹುದಲ್ಲವೇ
ಅದೇ ರೀತಿ ಈ ಮನಸ್ಸನ್ನು ಸರಿದಾರಿಗೆ ತರಬಹುದು
ಹೇಗೆಂದರೇ 

ನನ್ನೋಳಗಿನ ದುರಂಹಕಾರ ತೊರೆದು
ಮತ್ತೆ ಹೊರಳಬೇಕಿದೆ ಸಚ್ಚಾರಿತ್ರದೆಡೆಗೆ
ಮತ್ತೆ ತೋಡಬೇಕಿದೆ ಸದ್ಗುಣಗಳೆಂಬ
ಹೊಸ ಅಂಗಿಯನ್ನು.
ಮತ್ತೆ ಹರಿಯದಿರಲಿ ಮನಸ್ಸೆಂಬ ಅಂಗಿ.

_NDG

No comments:

Post a Comment